ಭಾವಗೀತೆಗಳ ಭಾವನೆಯೇ ವಿಚಿತ್ರ, ಹೇಳಲಾಗದು, ಹೇಳಲಿರಲಾಗದು. ಹೊಸ ವರುಷದ ಹುರುಪಿನಲ್ಲಿ ಕೆಲವು ಕವಿತೆಗಳನ್ನು ನಿಮ್ಮೊಂದಿಕೆ ಹಂಚಿಕೊಳ್ಳುವ ಬಯಕೆ. ಈ ಕವಿತೆಗಳಲ್ಲಿ ಬಹಳಷ್ಟು ಸಾರಂಶವಿದ್ದರೂ ಇದಕ್ಕೆ ಸಂಗೀತದ ರುಚಿಯನ್ನು ಕೊಟ್ಟು ನವರಸವನ್ನು ತುಂಬಿದ ದಿವಂಗತ ಅಶ್ವತರನ್ನು ಮರೆಯಲಾಗದು. ಅಂತರ್ಜಾಲದಲ್ಲಿ ಎಷ್ಟು ಹುಡುಕಿದರೂ ಈ ಕವನದ ಸಾಹಿತ್ಯ ಸಿಗಲ್ಲಿಲ್ಲ; ಕವಿತೆಯನ್ನು ಕೇಳಬಯಸುವವರು ಈ ಕೊಂಡಿಯಲ್ಲಿ ಪ್ರಯತ್ನಿಸಬಹುದು : http://www.kannadaaudio.com/Songs/Bhaavageethe/home/Nammoru-Chandavo-KS-Narasimha-Swamy.php
ಇನ್ನೊಂದು ಕವಿತೆ - ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು .... (ಮುಂದಿನ ಸಂಚಿಕೆಯಲ್ಲಿ)
ಕೆ. ಎಸ್. ನರಸಿಂಹಸ್ವಾಮಿ ವಿರಚಿತ
ಶಾನುಭೋಗರ ಮಗಳು ತಾಯಿ ಇಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ
ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲಾ
ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯೆಂದದಿ ಬಂದು ಕಂಪನೆರೆಯುವುದೆಂದು
ಇಂಥ ಬಾಳಿಗೆ ಒಲವೆ ನಿನ್ನ ಕನಸು
ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು
ಮೊನ್ನೆ ತಾವರಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ
ಮಗಳ ಮಾತನು ಕೇಳಿ ನಕ್ಕುಬಿಟ್ಟರು
ತಂದೆ; ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ
ಮುಂದೆ ತೆರಳಿದನು ಜೋಯಿಸನು ತಣ್ಣಗಾಗಿ
ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ
ಕಂಡು ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲ್ಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು
ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೆ ಇಂಥ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು
ಶಾನುಭೋಗರ ಮಗಳು ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ
ತಡವಾದರೆಂತೆ ನಷ್ಟವಿಲ್ಲ
-ಪ್ರತಿ (PC)
No comments:
Post a Comment